Posts

ಮಾವಿನ ಕೈ ಪುರಾಣ

Image
ಇವತ್ತಿಗೆ ಹೆಚ್ಚು ಕಮ್ಮಿ 60 - 65 ವರ್ಷಗಳ ಹಿಂದಿನ ಬಂಗಾರದಂತ ಕಾಲವದು..... ಪಶ್ಚಿಮ ಘಟ್ಟಗಳ ತಪ್ಪಲಿನ ಮಲೆನಾಡು ಭಾಗದ ಕಾಡಂಚಿನ ಒಂದು ಮನೆ "ಮಾವಿನ ಕೈ" . ಮಣ್ಣು ಸುಣ್ಣದ ಗೋಡೆ, ಮರದ ಅಡ್ಡೆಯ ಮೇಲೆ ಕೆಲವು ಕಡೆ ಮಂಗಳೂರು ಹೆಂಚು, ಉಳಿದ ಕಡೆ ಅಡಿಕೆ ಸೋಗೆ ಹೊದ್ದ ಪುಟ್ಟ ಮನೆ.  ಊರಿಗೊಂದೇ ಮನೆ.  ಮನೆಯ ಬಾಗಿಲಿಗೆ ಅಡಿಕೆ ಚಪ್ಪರ/ ಅಟ್ಟ. ಅಂಗಳದ ತುದಿಗೆ ಮಾವು ಬೇವು, ಬಾಳೆ, ತೆಂಗು. ಎದುರಿನ ತೋಟದಲ್ಲಿ ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಕಾಳುಮೆಣಸು, ಲವಂಗ, ವೀಳ್ಯದೆಲೆಯಿಂದ ಕೂಡಿದ ಮಿಶ್ರ ಬೆಳೆಗಳು. ಪಕ್ಕದ ಗದ್ದೆಯಲ್ಲಿ ನಾಟಿ ಭತ್ತ, ಉದ್ದು, ತೊಗರಿ, ಹೆಸರು, ಶುಂಠಿ, ಮೆಣಸು, ಮಗೆ ಸೌತೆಯ ಬೆಳೆ. ಮನಗೆ ತಾಗಿಕೊಂಡಂತಿದ್ದ ಕೊಟ್ಟಿಗೆಯ ತುಂಬಾ ಮಲೆನಾಡು ಗಿಡ್ಡ ತಳಿಯ ದನಕರುಗಳು, ಹಾಲಿನ ಹೊಳೆ. ಅದರಾಚೆ ಎತ್ತಿನ ಕೊಟ್ಟಿಗೆ.  ನೇಗಿಲು, ಎತ್ತಿನ ಗಾಡಿ ಸೇರಿದಂತೆ ಕೃಷಿ ಪರಿಕರಗಳನ್ನು ಸಂಗ್ರಹಿಸಿಡುವ ಉಗ್ರಾಣ. ಮನೆ ಹಿಂದಿನ ಬ್ಯಾಣದಲ್ಲಿ ನೆಲ್ಲಿ, ನೇರಳೆ, ಪೇರಳೆ, ಕೌಳಿ, ಪರಿಗೆ, ಮುಳ್ಳು ಹಣ್ಣುಗಳು. ಬೆಟ್ಟದಲ್ಲಿ ಮಾವು,  ಹಲಸು, ವಾಟೇ, ಉಪ್ಪಾಗೆ. ಮನೆಯ ಸುತ್ತಮುತ್ತಲಿನ  ತೋಟ, ಗದ್ದೆ, ಬೆಟ್ಟ, ಬ್ಯಾಣದಲ್ಲಿ ನೈಸರ್ಗಿಕವಾಗಿ ಹರಡಿರುವ ನೂರಾರು ಪ್ರಭೇದದ ತರಹೇವಾರಿ ಔಷಧೀಯ  ಸಸ್ಯಗಳು. ನಿತ್ಯ ಊಟ ತಿಂಡಿಗೆ ಬಾಳೆ ಎಲೆಯ ಬಳಕೆ. ಅಡುಗೆ ಪದಾರ್ಥಗಳು ತಯಾರಾಗುತ್ತಿದ್ದುದು ಮನೆಯಲ್ಲೇ ಬೆಳೆದು ಹಸನು ಮಾಡಿದ ಕಾಳು, ಬೇಳೆ, ತರಕಾ